ಪುತ್ತಿಗೆ ಬ್ರಹ್ಮಕಲಶೋತ್ಸವ 2025
II ಶ್ರೀ ಸೋಮನಾಥೇಶ್ವರ ಪ್ರಸನ್ನಃ II II ಶ್ರೀ ಮಹಿಷಮರ್ದಿನಿ ಪ್ರಸನ್ನಾಃ II
II ಸೋಮನಾಥೇಶ್ವರಂ ವಂದೇ ಚೌಟ ಸೀಮಾ ಪುರಾಭಿದೇ II
II ನೃಸಿಂಹ ದುರ್ಗಾ ಗಣಪೈಃ ಪುತ್ತೆ ಕ್ಷೇತ್ರೇ ವಿರಾಜಿತಂ II
ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ
ಶ್ರೀ ಕ್ಷೇತ್ರ ಪುತ್ತಿಗೆ, ಮೂಡುಬಿದಿರೆ
ಆತ್ಮೀಯ ಭಗವದ್ಭಕ್ತರೇ,
ಸ್ವಸ್ತಿ| ಶ್ರೀ ಕ್ರೋಧಿ ನಾಮ ಸಂವತ್ಸರದ ಶಿಶಿರಋತು ಕುಂಭ ಮಾಸ ದಿನ ೧೬ ಸಲುವ ಫಾಲ್ಗುನ ಶುದ್ಧ ಪಾಡ್ಯ ದಿನಾಂಕ 28-02-2025ನೇ ಶುಕ್ರವಾರದಿಂದ ಮೊದಲ್ಗೊಂಡು ಕುಂಭ ಮಾಸ ದಿನ ೨೩ ಸಲುವ ಫಾಲ್ಗುನ ಶುದ್ಧ ಅಷ್ಟಮಿ ದಿನಾಂಕ 07-03-2025ರ ಶುಕ್ರವಾರ ಪರ್ಯಂತ ಚೌಟರ ಸೀಮೆಯ ಆರಾಧ್ಯ ಶ್ರೀ ಸೋಮನಾಥೇಶ್ವರ ದೇವರು, ಶ್ರೀ ಮಹಿಷಮರ್ದಿನಿ ಅಮ್ಮನವರು ಹಾಗೂ ಪರಿವಾರ ದೇವರುಗಳ
ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು
ಶ್ರೀ ದೇವರ ಪ್ರೀತ್ಯರ್ಥವಾಗಿ ಎಡಪದವು ತಂತ್ರಿವರೇಣ್ಯರುಗಳ ನೇತೃತ್ವದಲ್ಲಿ ಹಾಗೂ ಅರ್ಚಕ ವೃಂದ ಋತ್ವಿಜರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಲಿರುವುದು.