ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಪ್ರಯುಕ್ತ ಚಪ್ಪರ ಮುಹೂರ್ತ
ಇಂದು ಕ್ಷೇತ್ರದ ಬ್ರಹ್ಮಕಲಶೋತ್ಸವ ಪ್ರಯುಕ್ತ ಚಪ್ಪರ ಮುಹೂರ್ತ ನೆರವೇರಿತು... Read More
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದಲ್ಲಿ ಸಪರಿವಾರವಾಗಿ ಕಂಗೊಳಿಸುತ್ತಿರುವ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಧರ್ಮ- ಆಧ್ಯಾತ್ಮಿಕ ಆಧಾರಿತವಾಗಿ ಒನಪದಕ್ಕೆ ಶ್ರಧ್ದಾಸ್ಥಾನವಾಗಿದೆ. ತುಳುನಾಡಿನ ಪ್ರತಿಷ್ಠಿತ ಅರಸು ಮನೆತನವಾದ ಚೌಟರಿಂದ ಸ್ಥಾಪಿತವಾಗಿ ಐತಿಹಾಸಿಕ ಮಹತ್ವವನ್ನು ಪಡೆದು ಸರಿಸುಮಾರು 900 ವರ್ಷಗಳ ವೈಭವದ ಇತಿಹಾಸವನ್ನು ವರ್ಣರಂಜಿತವಾಗಿ ಪಡೆದುಕೊಂಡಿದೆ.
ಪ್ರಾಚೀನತೆ ,ಚಾರಿತ್ರಿಕ ಹಿನ್ನೆಲೆ , ಧಾರ್ಮಿಕ ದಿವ್ಯತೆ ಇರುವ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥ ದೇವರ ದೇವಾಲಯದ ಪುನಾರಚನೆಗೆ ಸಂಕಲ್ಪಿಸಲಾಗಿದೆ . ಇತಿಹಾಸವನ್ನು ಮತ್ತೆ ಕಟ್ಟುವ ಕೆಲಸಕ್ಕೆ ತೊಡಗಿದ್ದೇವೆ , ಬನ್ನಿ……ನಮ್ಮ ಸಂಕಲ್ಪ ಪೂರ್ತಿಗೆ ನಮ್ಮೊಂದಿಗೆ ಕೈಜೋಡಿಸಿ ಶ್ರೀ ಸೋಮನಾಥ ದೇವರ ಕೃಪೆಗೆ ಪಾತ್ರರಾಗಿ ಎಂಬುದು ನಿವೇದನೆ .
ದೇವಾಲಯದ ಸಮಯ |
---|
ಬೆಳಿಗ್ಗೆ ತೆರೆಯುವ ಸಮಯ | 6:30AM | ||
ಸೇವಾ ಸಮಯ | 8:00AM – 1:00PM 5:00PM – 8:00PM 5:00PM – 8:30PM [ಸೋಮವಾರ] |