+91 - 9845 9 807 92 | sst.puthige@gmail.com

ಶ್ರೀ ಕ್ಷೇತ್ರದ ಜೀರ್ಣೋದ್ಧಾರದ

ವಿನಮ್ರ ನಿವೇದನೆ

ಪುತ್ತಿಗೆ ಶ್ರೀ ಸೋಮ‌ನಾಥೇಶ್ವ‌ರ‌ ದೇವಾಲ‌ಯ‌

ಭಗವದ್ಭಕ್ತರೆ,

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದಲ್ಲಿ ಸಪರಿವಾರವಾಗಿ ಕಂಗೊಳಿಸುತ್ತಿರುವ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಧರ್ಮ- ಆಧ್ಯಾತ್ಮಿಕ ಆಧಾರಿತವಾಗಿ ಒನಪದಕ್ಕೆ ಶ್ರಧ್ದಾಸ್ಥಾನವಾಗಿದೆ. ತುಳುನಾಡಿನ ಪ್ರತಿಷ್ಠಿತ ಅರಸು ಮನೆತನವಾದ ಚೌಟರಿಂದ ಸ್ಥಾಪಿತವಾಗಿ ಐತಿಹಾಸಿಕ ಮಹತ್ವವನ್ನು ಪಡೆದು ಸರಿಸುಮಾರು 900 ವರ್ಷಗಳ ವೈಭವದ ಇತಿಹಾಸವನ್ನು ವರ್ಣರಂಜಿತವಾಗಿ ಪಡೆದುಕೊಂಡಿದೆ. ತಮ್ಮ ಅರಸೊತ್ತಿಗೆಯನ್ನು ಉಳ್ಳಾಲದಿಂದ ಮೂಡಬಿದಿರೆಗೆ ಸ್ಥಳಾಂತರಗೊಳಿಸಿದ ಚೌಟರು ನಿತ್ಯ ಸಕಾಲದಲ್ಲಿ ಶ್ರೀ ಸೋಮನಾಥ ದೇವರ ಪ್ರಸಾದವನ್ನುಸ್ವೀಕರಿಸಲು ನಿರಾಳವಾಗುವಂತೆ ದೇವಾಲಯ ನಿರ್ಮಾಣ ಮಾಡುವ ಸಂಕಲ್ಪ ಹೊಂದಿದ್ದರು. ಹುಲಿ-ದನವು ಜೊತೆಗೆ ವಿಹರಿಸುತ್ತಿದ್ದ ದೃಶ್ಯವು ಈ ಸನ್ನಿಧಾನದಲ್ಲಿ ಪ್ರತ್ಯಕ್ಷವಾಗಿ ಗೊಚರಿಸಿ ದೇವಾಲಯ ನಿರ್ಮಿಸಿದರು ಎಂಬುದು ಪ್ರತೀತಿ.

ಧರ್ಮ – ಅಧ್ಯಾತ್ಮ ಆಧರಿತವಾದ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ದೇವಾಲಯಗಳು ಇವೆ .  ಸಮಷ್ಟಿಗೆ ಅಥವಾ ಜನಪದಕ್ಕೆ ಶ್ರದ್ಧಾಸ್ಥಾನವಾಗಿ , ಐತಿಹಾಸಿಕ ಮಹತ್ವ , ದಟ್ಟವಾದ ಜಾನಪದ ಹಿನ್ನೆಲೆ , ಸಾಮಾಜಿಕ ಸ್ಥಾನಮಾನಗಳುಳ್ಳ ವಿಸ್ತಾರವಾದ ಕೂಡುಕಟ್ಟಿನ ವ್ಯಾಪ್ತಿಯನ್ನು  ಒಳಗೊಂಡ  ಇಂತಹ ದೇವಾಯತನಗಳಲ್ಲಿ ಮೂಡಬಿದಿರೆಯ‌ ಚೌಟರ ಪುತ್ತಿಗೆಯ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಳವು ಒಂದು . ಕಾಲ ಕಾರಣವಾಗಿ ಜೀರ್ಣಗೊಂಡ ಈ ದೇವಾಲಯದ ಪುನರುತ್ಥಾನಕ್ಕೆ ಅಂದರೆ ಜೀರ್ಣೋದ್ಧಾರಕ್ಕೆ ಸಂಕಲ್ಪ ಸ್ವೀಕರಿಸಲಾಗಿದೆ .  ಮಹತೋಭಾರ ಮಹತಿಗೆ ಪೂರಕವಾದ ರೀತಿಯಲ್ಲಿ ಪುನರುತ್ಥಾನ ನಡೆಸಲು ಉಪಕ್ರಮಿಸಲಾಗಿದೆ.

ದೇವಾಲಯಕ್ಕೆ ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುವ ಹದಿನೆಂಟು ಮಾಗಣೆಯ ಎಪ್ಪತ್ತೆಂಟು ಗ್ರಾಮಗಳ ಭಕ್ತರಲ್ಲಿ ,ಊರ – ಪರವೂರ  ಭಗವದ್ಭಕ್ತರಲ್ಲಿ  ನಿವೇದಿಸಿಕೊಳ್ಳುವುದೇನಂದರೆ ;  ಸೋಮನಾಥ ದೇವರ ದೇವಾಲಯ ನವೀಕರಣ ಕಾರ್ಯದ ಸದವಕಾಶ ನಮಗೆ ಪ್ರಾಪ್ತಿಯಾಗಿದೆ . ನೂತನ ದೇವಾಲಯ ನಿರ್ಮಾಣಕ್ಕಿಂತಲೂ ಜೀರ್ಣ ದೇವಾಲಯದ ಜೀರ್ಣೋದ್ಧಾರ ಪುಣ್ಯಪ್ರದವಾದ ಸತ್ಕಾರ್ಯ ಎಂದು ಶಾಸ್ತ್ರ ಪ್ರಮಾಣವಿದೆ . ಆದುದರಿಂದ ಆಡಳಿತೆದಾರರು ಮತ್ತು ಜೀರ್ಣೋದ್ಧಾರ ಸಮಿತಿ ಸಂಕಲ್ಪಿಸಿದ ಕಾರ್ಯ ಪೂರ್ತಿಗೆ ತನು – ಮನ – ಧನಗಳಿಂದ ಪ್ರೋತ್ಸಾಹಿಸಿ ಶ್ರೀ ಸೋಮನಾಥ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿಕೊಳ್ಳುತ್ತೇವೆ.

ಈ ಧಾರ್ಮಿಕ ಬೃಹತ್ ಪುಣ್ಯ ಕೈಂಕರ್ಯದಲ್ಲಿ ಊರ-ಪರವೂರ ಭಕ್ತಬಾಂಧವರು ತ್ರಿಕರಣಶುದ್ಧರಾಗಿ
ಹೃತ್ಪೂರ್ವಕ ಸಹಕಾರದಿಂದ ಕೂಡಿ ನಡೆದರೆ ಮಾಡುವ ಸೇವೆಯು ನಿರ್ವಿಘ್ನವಾಗಿ ಕೃತಾರ್ಥವಾಗುವುದರಲ್ಲಿ ಸಂಶಯವಿಲ್ಲ. ಶ್ರೀ ಸೋಮನಾಥೇಶ್ವರ ದೇವರ ಸೇವೆಯೆಂದು ಉದಾತ್ತ ಮನಸ್ಸಿನಿಂದ ನೆರವು ನೀಡಿ, ಕರುಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಮ್ರ ವಿನಂತಿಸುತ್ತೇವೆ.

ಸಮಗ್ರ ಜೀರ್ಣೋದ್ಧಾರಕ್ಕೆ ಅಂದಾಜು ೧೫ ಕೋಟಿ ರೂಪಾಯಿ ವೆಚ್ಚದ ಯೋಜನೆ ಸಿದ್ಧಗೊಂಡಿದೆ.

ಗರ್ಭಗುಡಿ: ಅಂದಾಜು ರೂ. ೧.೫ ಕೋಟಿ ವೆಚ್ಚದಲ್ಲಿ ಶ್ರಿ ಸೋಮನಾಥೇಶ್ವರ ದೇವರ ಶಿಲಾಮಯ ಗರ್ಭಗುಡಿಯ ನಿರ್ಮಾಣ. ಅಂದಾಜು ರೂ. ೧ ಕೋಟಿ ವೆಚ್ಚದಲ್ಲಿ ಶ್ರೀ ಮಹಿಷಮರ್ದಿನಿ ಅಮ್ಮನವರÀ ಶಿಲಾಮಯ ಗರ್ಭಗುಡಿಯ ನಿರ್ಮಾಣ.
ತೀರ್ಥಮಂಟಪ: ಅಂದಾಜು ೩೦ ಲಕ್ಷ ವೆಚ್ಚದಲ್ಲಿ ಶಿಲಾಮಯ ತೀರ್ಥಮಂಟಪ ನಿರ್ಮಾಣ.
ಧ್ವಜಸ್ತಂಭ: ಅಂದಾಜು ರೂ. ೧೫ ಲಕ್ಷ ವೆಚ್ಚದಲ್ಲಿ ಈಗಿನ ಧ್ವಜಸ್ತಂಭವನ್ನು ತೆಗೆದು ಅದರಂತೆಯೇ ಹೊಸ ಧ್ವಜಸ್ತಂಭವನ್ನು ಪ್ರತಿಷ್ಠಾಪಿಸಿ, ಲೋಹದ ಹೊದಿಕೆ ಹೊದಿಸುವುದು.
ಒಂದನೇ ಸುತ್ತು ಪೌಳಿ: ಅಂದಾಜು ರೂಪಾಯಿ ೪ ಕೋಟಿ ೫೦ ಲಕ್ಷ ವೆಚ್ಚ
ಎರಡನೇ ಸುತ್ತು ಪೌಳಿ: ಅಂದಾಜು ರೂಪಾಯಿ ೬ ಕೋಟಿ ವೆಚ್ಚ
ಪೂರ್ವ ಮತ್ತು ಪಶ್ಚಿಮ ಗೋಪುರಗಳು : ಅಂದಾಜು ರೂಪಾಯಿ ೧ ಕೋಟಿ ವೆಚ್ಚ. ಇತರ ರೂಪಾಯಿ ೫೫ ಲಕ್ಷ ವೆಚ್ಚ.

ದೇಣಿಗೆ ನೀಡುವವರ ಗಮನಕ್ಕೆ,

ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ

ಕರ್ಣಾಟಕ ಬ್ಯಾಂಕ್ ಮೂಡಬಿದಿರೆ

A/c no: 4822500102101101

IFSC: KARB0000482

ನಿವೇದನ ಪತ್ರ

ಈ ದೇವಾಲಯ ನಿಮ್ಮದು, ಇದರ ಅಭಿವೃದ್ದಿಗಾಗಿ ಬನ್ನಿ ಭಾಗಿಗಳಾಗಿ ಸಹಕರಿಸಿ

Download